Friday, March 13, 2015

ನವಜಾತ ಶಿಶು

ನವಜಾತ ಶಿಶು

"ತಾಯ್ತನ" ಹೆಣ್ಣಿಗೆಂದೇ ಪ್ರಕೃತಿ ನೀಡಿರುವ ಅತ್ಯದ್ಭುತ ಕೊಡುಗೆ.

ನವಜಾತ ಶಿಶುವಿನ ಬರುವಿಕೆನವ ತಾಯಿ-ತಂದೆನವ ಅಜ್ಜಿ-ತಾತಂದಿರಿಗೆ ಒಂದೆಡೆ ನವ ಹರ್ಷವನ್ನುಂಟುಮಾಡಿದರೆ - ಮತ್ತೊಂದೆಡೆನವ ಮಾನಸಿಕ ಒತ್ತಡ ಹೇರುತ್ತದೆ...!

ಭಾವೀ ತಾಯಂದಿರಲ್ಲಿ ಮೂಡುವಂತಹ ಅನೇಕ ಪ್ರಶ್ನಾರ್ಥಕ ಚಿಹ್ನೆಗಳು: ನನ್ನ ಮಗು ಎಂತಹುದುಎಷ್ಟು ತೂಕವಿರಬಹುದುಹೇಗಿರಬಹುದುಮಗುವಿನ ಬೇಡಿಕೆಗಳೆಂತಹವು?  ಯಾವಾಗಳು ಅಳುತ್ತಿದ್ದರೇನು ಮಾಡುವುದುಎದೆ ಹಾಲುಸೀಸೆ ಹಾಲುಇತ್ಯಾದಿ...? ಅಷ್ಟೇ ಅಲ್ಲದೆಮನೆ ಹಿರಿಯರ ಹಾಗು ನೆರೆಹೊರೆಯವರ ಬಿಟ್ಟೀ ಸಲಹೆಗಳು (ಕೆಲವು ಉಪಯುಕ್ತವಾದರೆಮತ್ತಲವು ಕೆಲಸಕ್ಕೆ ಬಾರದವು ಅಥವ ಹಾನಿಕರವೂ ಕೂಡ...!)

ಈ ಪರಿ ಒತ್ತಡ ಒಂದೆಡೆಯಾದರೆ...ಮತ್ತೊಂದೆಡೆ - ನವಜಾತ ಶಿಶುವಿನ ಮನದ ಮಾತು "ನವ ಮಾಸಗಳೂಒಂದು ಕ್ಷಣವೂ ಬಿಡುವಿಲ್ಲದ ಅತೀ-ಸುರಕ್ಷಿತ ಗರ್ಭದೊಳಗಿನ ವಾತಾವರಣದಿಂದ (24 x 7 – Womb Service for 9months…!ಹೊರಬರಲಿರುವ ನನಗೆ ಅಷ್ಟೇ ಸುಸಜ್ಜಿತ ಪರಿಸರ ಸಿಗಬಹುದೇ...?"

ನವಜಾತ ಶಿಶು - ಸಾಮಾನ್ಯ ಗುಣಲಕ್ಷಣಗಳು 

ಜನನ ತೂಕ   (Birth Weight): ಸಾಧಾರಣವಾಗಿ ೨೫೦೦-೪೦೦೦ಗ್ರಾಂ.  ಮಗುವಿನ ಜನನ ತೂಕವು ಐದನೇ ತಿಂಗಳಲ್ಲಿ ದ್ವಿಗುಣವಾಗಿಒಂದು ವರ್ಷ ತುಂಬುವುದರಲ್ಲಿ ತ್ರಿಗುಣವಾಗುವುದು ನಿರೀಕ್ಷಿತ.

ಪರಿಪಕ್ವತೆ (Maturity): ಪಕ್ವ (Term೩೭ರಿಂದ ೪೦ಪೂರ್ಣಗೊಂಡ ವಾರಗಳು; ಅಪಕ್ವ/ಅಕಾಲಿಕ ಜನನ (Preterm೩೭ವಾರದೊಳಗಿನ ಜನನ

ಪ್ರಸವಿಸಿದ ೩೦ನಿಮಿಷದೊಳಗೆ ಎದೆಹಾಲು ಕೊಡುವುದು (ಸಿಜ಼ೀರಿಯನ್ ಆಪರೇಷನ್ ಆಗಿದ್ದಲ್ಲಿ ತಾಯಿಯ ಆರೋಗ್ಯ ಸುಧಾರಿಸಿದೊಡನೆ ಎದೆಹಾಲುಣಿಸುವುದು).

ಮೂತ್ರ ಹಾಗು ಮಲ ವಿಸರ್ಜನೆ

ಮೂತ್ರ: ಸಾಮಾನ್ಯವಾಗಿ ಪ್ರಸವಿಸಿದ ೩೬-೪೮ಗಂಟೆಯೊಳಗೆ ಮೂತ್ರ ವಿಸರ್ಜಿಸಬೇಕು (ಇಲ್ಲವಾದಲ್ಲಿ ವೈದ್ಯರ ಗಮನಕ್ಕೆ ತರುವುದು).  ಕೆಲ ಶಿಶುಗಳು ಮೂತ್ರ ಮಾಡುವಾಗ ಅಳುವುದು ಸಹಜ.  ನವಜಾತ ಶಿಶುವು ಕನಿಷ್ಠ ೫-೬ಬಾರಿ ಮೂತ್ರ ಮಾಡಬೇಕು.  ಮೂತ್ರದಲ್ಲಿ ಕೆಂಪು/ಕಿತ್ತಳೆ ಬಣ್ಣದ ಹರಳುಗಳು ಕಾಣಿಸಿಕೊಳ್ಳುವುದು ಸಹಜ (ಗಾಬರಿ ಬೇಡ...ವೈದ್ಯರ ಗಮನಕ್ಕೆ ತರುವುದು ಉತ್ತಮ).

ಮಲಸಾಮಾನ್ಯವಾಗಿ ಪ್ರಸವಿಸಿದ ೨೪-೩೦ಗಂಟೆಯೊಳಗೆ ಮಲ ವಿಸರ್ಜಿಸಬೇಕುಮೊದಲ ೨-೩ದಿನಗಳು "ಮಿಕೋನಿಯಂ" (ಭ್ರೂಣದ ಕರುಳಿನಲ್ಲಿ ರೂಪುಗೊಂಡುಜನಿಸಿದ ತಕ್ಷಣ ವಿಸರ್ಜಿತವಾಗುವ ಪದಾರ್ಥಮಲದ ಬಣ್ಣವು ಕಪ್ಪು ಬಣ್ಣ ಅಥವ ಕಡು ಹಸಿರು ಬಣ್ಣದಾಗಿದ್ದುನಂತರದ ೨-೩ದಿನಗಳು ತಿಳಿ ಹಸಿರು ಅಥವ ಹಸಿರು ಮಿಶ್ರಿತ ಹಳದಿಯಾಗಿದ್ದುಮೊದಲ ವಾರ ಕಳೆದ ನಂತರ ಮಲವು ಹಳದಿ ಬಣ್ಣದ್ದಾಗಿರುತ್ತದೆ.  ಮಗುವು ದಿನಕ್ಕೆ ೩-೪ಬಾರಿ ಅಥವ ಕೆಲವು ಬಾರಿ ೩-೪ದಿನಕ್ಕೊಮ್ಮೆ ಮಲ ವಿಸರ್ಜಿಸುವುದು ಸಹಜಮಲವು ಬಹಳ ಗಟ್ಟಿಯಾಗಿದ್ದಲ್ಲಿ ಅಥವ ಮಗುವು ಮಲ ಹೊರಹಾಕಲು ಬಹಳ ಮುಕ್ಕುತ್ತಿದ್ದಲ್ಲಿ ವೈದ್ಯರ ಗಮನಕ್ಕೆ ತರುವುದು.

ವಿಪರೀತ ಅಳುವುದು/ರಚ್ಚೆ ಹಿಡಿಯುವುದು:  ಮೊದಲ ೨ರಿಂದ-೪ತಿಂಗಳುಗಳ ಕಾಲ ಮಗುವುದಿನದಲ್ಲಿ ಮಲಗಿ ರಾತ್ರಿ ಹೊತ್ತು ಅಳುವುದು ಸಹಜ (ತಾಯಿಯ ಗರ್ಭದೊಳಗಿನ ಗುಣಭ್ರೂಣವಾಗಿದ್ದಾಗತಾಯಿ ಹಗಲಿನ ಹೊತ್ತು ನಡೆದಾಡುವಾಗೆಲ್ಲ ಗರ್ಭದೊಳಗಿನ ಆಮ್ನಿಯೋಟಿಕ್ ದ್ರವದ ಪ್ರಭಾವದಿಂದತೊಟ್ಟಿಲು ತೂಗಿದಂತಿದ್ದುಮಗು ಮಲಗಿರುತ್ತದೆ "Cradle effect".  ಹಾಗುರಾತ್ರಿ ತಾಯಿ ಮಲಗಿದಾಗ ತೊಟ್ಟಿಲು ನಿಂತಿದ್ದುಮಗುವು ಎದ್ದಿರುತ್ತದೆ.  ಇದೇ ಗುಣ ಜನಿಸಿದ ೨ರಿಂದ-೪ತಿಂಗಳುಗಳವರೆಗೆ ಮುಂದುವರೆಯುವುದು...! "Sleep-Wake Cycle") ಮಗು ಅಳುವುದು ಸಹಜ ಹಾಲು ಸಾಲುವುದಿಲ್ಲವೆಂದು ಮೇಲಿನ ಹಾಲಾಕುವುದು ತಪ್ಪು ಅಳುವುದಕ್ಕೆ ಅನೇಕ ಕಾರಣಗಳು ಮೂತ್ರ/ಮಲ ವಿಸರ್ಜಿಸಿರಬಹುದುವಾಂತಿ ಮಾಡಿರಬಹುದುಮತ್ತೇನಾದರು ಅಸ್ವಸ್ಥತೆ ಕಾಡುತ್ತಿರಬಹುದು...ಕಾರಣಕ್ಕೆ ಕಡಿವಾಣ ಹಾಕುವುದನ್ನು ಬಿಟ್ಟುಬರೀ ಹಾಲನ್ನು/ಹಸಿವನ್ನು ದೂಷಿಸುವುದು ತಪ್ಪು...!  ಇವೆಲ್ಲದರ ನಂತರವೂ ಶಿಶುವನ್ನು ಸಮಾಧಾನ ಪಡಿಸಲಾಗದಿದ್ದರೆವೈದ್ಯರ ಗಮನಕ್ಕೆ ತರುವುದು.  ನೆನಪಿರಲಿ ನವಜಾತ ಶಿಶುವಿಗೆ ಬರುವ ಒಂದೇ ಭಾಷೆ - "ಅಳು...". 

  
ಕಣ್ಣುಗಳು: ನವಜಾತ ಶಿಶುವಿನ ಕಣ್ಣುಗಳಲ್ಲಿ ನೀರು ಬರುವುದು ಸಹಜ.  ಆದರೆ ಕಣ್ಣು ಕಟ್ಟಿಕೊಳ್ಳುವುದು ಅಥವ ಹಳದಿ/ಬಿಳಿ ಬಣ್ಣದ ದ್ರವ (Eye discharge) ಹೊರಬೀಳುವುದು ಸೋಂಕಿನ ಲಕ್ಷಣ.  ಮಗುವಿನ ಕಣ್ಣು ಗುಡ್ಡೆಯ ಬಿಳಿಭಾಗವು (ಶ್ವೇತಾಕ್ಷಿಪಟ - Sclera)  -೩ವಾರಗಳವರೆಗೆ ತಿಳಿ ಹಳದಿ ಬಣ್ಣವಾಗಿರಬಹುದು (ನವಜಾತ ಶಿಶುವಿನಲ್ಲಿ ಕಂಡುಬರುವ ಕಾಮಾಲೆಯೆಂದು ಹೆದರುವ ಅವಶ್ಯವಿಲ್ಲ)

ಮೂಗು: ಮೂಗಿನಿಂದ/ಗಂಟಲಿನಿಂದ ಗೊರಗೊರ ಶಬ್ಧ ಬರುವುದು ಸಹಜ - ಯಾವುದೇ ಚಿಕಿತ್ಸೆ ಬೇಡ. ತೀವ್ರ ಶಬ್ಧ ಅಥವ ಮೊಲೆ ಹೀರಲು ತೊಂದರೆಯಿದ್ದಲ್ಲಿ ವೈದ್ಯರ ಸಲಹೆ ತೆಗೆದುಕೊಳ್ಳುವುದು.

ಬಾಯಿ:
** ನಾಲಿಗೆ/ಬಾಯಿಯ ಒಳ ಭಾಗದಲ್ಲಿ ಬಿಳಿ ಪೊರೆ ಕಂಡುಬರುವುದು ಸಾಮಾನ್ಯ.  ಪೊರೆ ಹೆಚ್ಚಾದಲ್ಲಿ ಮಗುವಿಗೆ ಹಾಲು ಕುಡಿಯಲು ತೊಂದರೆಯಾಗುವುದು.  ಇದು ಫಂಗಸ್ ಸೋಂಕಿನಿಂದ ಉಂಟಾಗುತ್ತದೆ ಹಾಗು ಚಿಕಿತ್ಸೆಯ ಅವಶ್ಯವಿದೆ
** ಅಣ್ಣಾಕಿನಲ್ಲಿ (Hard Palate) ಬಿಳಿ ಪಕಳಿಗಳು ಕಂಡುಬರುವುದು ಸಹಜ
** ಕೆಲ ಮಕ್ಕಳಲ್ಲಿ ಹುಟ್ಟಿದಾಗ ಹಲ್ಲು (Natal teeth) ಕಾಣುವುದು ಸಾಮಾನ್ಯ.

ಎದೆಹುಟ್ಟಿದ ೨೪-೪೮ಗಂಟೆಗಳಲ್ಲಿಮಗುವಿನ ಎದೆ ಭಾಗದ (Mastitis Neonatorum) - ಎರಡೂ ಕಡೆಯು ಗಂಟು ಕಾಣಿಸಿಕೊಳ್ಳಬಹುದು.  ಇದು ತಾಯಿಯ ಹಾರ್ಮೋನುಗಳಿಂದಾಗುವ ವ್ಯತ್ಯಾಸದಿಂದ ಸಂಭವಿಸುವಂತದು.  ಇದಕ್ಕೆ ಯಾವುದೇ ಚಿಕಿತ್ಸೆ ಬೇಡಹಾಗು  ಗಂಟುಗಳನ್ನು ತೀಡುವುದು/ಅದುಮುವುದು ಹಾನಿಕರ - ಹಾಗೆ ಮಾಡಿದಲ್ಲಿ ಕೀವು ಕಟ್ಟುವ ಸಾಧ್ಯತೆ ಬಹಳ...!-೧೪ದಿನಗಳಲ್ಲಿ ತಂತಾನೆ ಗುಣವಾಗುತ್ತದೆ.

ಹೊಕ್ಕಳ ಬಳ್ಳಿಸಾಮಾನ್ಯವಾಗಿ -೧೦ದಿನಗಳಲ್ಲಿ ತಂತಾನೆ ಉದುರುತ್ತದೆ.  ಹೊಕ್ಕಳ ಬಳ್ಳಿಗೆ ಯಾವುದೇ ಮುಲಾಮು/ಪೌಡರ್ ಹಾಕುವ ಅವಶ್ಯಕತೆಯಿಲ್ಲ.  ಅದನ್ನು ಹಾಗೆಯೇ ಒಣಗಲು ಬಿಟ್ಟರೆ ಉತ್ತಮ.  ಹೊಕ್ಕಳ ಬಳ್ಳಿ ಒದ್ದೆಯಾಗಿದ್ದಲ್ಲಿ - ಸೋಂಕಿಗೆ ಎಡೆ ಮಾಡಿಕೊಟ್ಟ ಹಾಗೆ...!  ಮಗುವಿಗೆ ಡಯಾಪರ್/ನ್ಯಾಪಿ ಹಾಕಬೇಕಿದ್ದಲ್ಲಿ - ಹೊಕ್ಕಳ ಬಳ್ಳಿಯ ಕೆಳಭಾಗದಲ್ಲಿ ಹಾಕುವುದು ಉತ್ತಮ.  ಸೋಂಕು/ವಾಸನೆಯಿಂದ ಕೂಡಿದ್ದರೆ - ವೈದ್ಯರ ಗಮನಕ್ಕೆ ತರುವುದು.  (Umbilical stump care – Dry Care is the Best Care)

ಚರ್ಮ:
** ನವಜಾತ ಶಿಶುವಿನ ಕಾಮಾಲೆ (Newborn Jaundice) ಮಗುವಿನ ಚರ್ಮವು ಹೆಚ್ಚು ಹಳದಿಯಾಗಿದ್ದಲ್ಲಿ ವೈದ್ಯರ ಬಳಿ ಕರೆದೊಯ್ಯುವುದು ಅಗತ್ಯ 
** ಮುಖದ/ದೇಹದ ಮೇಲೆ ಮೂಡುವ ಕೆಂಪು ಕಲೆಗಳು/ಮಚ್ಚೆಗಳುನೀರಿನ ಗುಳ್ಳೆಗಳು ಸಾಮಾನ್ಯ.  ಕೆಲ ಮಕ್ಕಳಿಗೆ ಸುತ್ತಲಿನ ಪರಿಸರದ ಉಷ್ಣ ಹೆಚ್ಚಾದಾಗ - ಕೆಂಪು ಮಚ್ಚೆಗಳು/ನೀರಿನ ಗುಳ್ಳೆಗಳು ಹೆಚ್ಚಾಗುವ ಸಾದ್ಯತೆ ಇರುತ್ತದೆ - ಹೆದರಬೇಕಿಲ್ಲ
** ಬಿಳಿ ಬಣ್ಣದ/ಹಳದಿ ಬಣ್ಣದ ಪಕಳಿಗಳು ಕಂಡುಬಂದಲ್ಲಿ - ವೈದ್ಯರ ಗಮನಕ್ಕೆ ತರುವುದು ಕೆಲವೊಮ್ಮೆ ಪ್ರತಿಜೀವಕ (Antibiotic) ಮುಲಾಮು/ಸಿರಪ್ಗಳ ಅವಶ್ಯಕತೆ ಬರಬಹುದು.  
** ಕೆಲ ಮಕ್ಕಳಲ್ಲಿ ಒಣ ಚರ್ಮ ಅಥವ ಚರ್ಮದ ಪೊರೆ ಬಿಟ್ಟುಕೊಳ್ಳುವುದು ಸಾಮಾನ್ಯ - ವ್ಯಾಸಲೀನ್/ಕೊಬ್ಬರಿ ಎಣ್ಣೆ ಉಪಯೋಗಿಸಿ.  
** ಬೆನ್ನಿನ/ಸೊಂಟದ ಭಾಗದಲ್ಲಿ ನೀಲಿ ಬಣ್ಣದ ಮಚ್ಚೆ (Mongolian spots) ಕಾಣಿಸುಕೊಳ್ಳುವುದು ಸಹಜ - ಗಾಬರಿ ಬೇಡ.  ಯಾವುದೇ ಚಿಕಿತ್ಸೆಯ ಅವಶ್ಯಕತೆಯಿಲ್ಲದೆ ೧೨-೧೮ತಿಂಗಳಲ್ಲಿ ಮಾಯವಾಗುವುದು.

ಜನನಾಂಗ: ಹೆಣ್ಣು ಮಗುವಿನ ಜನನಾಂಗದಿಂದ ಬಿಳಿ ದ್ರವ(White/Mucoid discharge) ಅಥವ ಸ್ವಲ್ಪ ರಕ್ತ ಬರುವುದು ಸಹಜ.  ಇದು ತಾಯಿಯ ಹಾರ್ಮೋನುಗಳಿಂದಾಗುವ ವ್ಯತ್ಯಾಸದಿಂದ ಸಂಭವಿಸುವಂತದು - ಸಾಧಾರಣವಾಗಿ -೫ದಿನಗಳಲ್ಲಿ ನಿಂತುಹೋಗುತ್ತದೆ. (ರಕ್ತ ಬರುವುದು ಹೆಂಗಸರಲ್ಲಿ ಕಂಡು ಬರುವ ಮುಟ್ಟಿಗೆ ಸಮಾನ - ಯಾವುದೇ ರೀತಿಯ ಚಿಕಿತ್ಸೆ ಅಥವ ಗಾಬರಿ ಬೇಡ.)  ಶುಭ್ರ ಬಟ್ಟೆ/ಹತ್ತಿಯಿಂದ ಒರೆಸಿದರೆ ಸಾಕು.

ತೊಡೆಸಂಧಿ ಹಾಗು ಮಲದ್ವಾರ: ತೊಡೆ ಸಂಧಿಗಳಲ್ಲಿ ಹಾಗು ಮಲದ್ವಾರದ ಸುತ್ತಲಿನ ಚರ್ಮವು ಕೆಂಪಾಗಿ - ನಂತರ ಹುಣ್ಣಾಗುವ ಸಾಧ್ಯತೆ (Diaper/Nappy Rash).  ಅತಿಯಾಗಿ ಡಯಾಪರ್/ನ್ಯಾಪಿ ಉಪಯೋಗಿಸುವುದರಿಂದ ಅಥವ ತೇವದ ಬಟ್ಟೆಗಳನ್ನು ಹೆಚ್ಚಿನ ಸಮಯ ಹಾಗೇ ಬಿಡುವುದರಿಂದ ಸಂಭವಿಸುತ್ತದೆ.  ಡಯಾಪರ್ ಆದಷ್ಟು ಕಡಿಮೆ ಉಪಯೋಗಿಸಿದರೆ ಉತ್ತಮ ಅಥವ ೩-೪ಗಂಟೆಗಳಿಗೊಮ್ಮೆ ಬದಲಾಯಿಸಿದರೆ ಒಳ್ಳೆಯದು.  ಶುಭ್ರವಾದ ಕಾಟನ್ ಬಟ್ಟೆಯಿಂದ ತಯಾರಿಸಿದ ಲಂಗೋಟಿ ಉಪಯೋಗಿಸುವುದು ಉತ್ತಮ (ಸಿಂಥೆಟಿಕ್ ಬಟ್ಟೆ ಬೇಡ).  ಮಗುವು ಮಲ ವಿಸರ್ಜಿಸಿದಾಗ - ಒದ್ದೆ ಮಾಡಿದ ಶುಭ್ರ ಹತ್ತಿ ಅಥವ ಕಾಟನ್ ಬಟ್ಟೆಯಿಂದ ಮೃದುವಾಗಿ ತಟ್ಟಿ (Dab) ಒರೆಸುವುದು ಒಳ್ಳೆಯದು; ತಿಕ್ಕಿ/ಉಜ್ಜಿ ಒರೆಸುವುದರಿಂದ  ತೊಂದರೆ ಉಲ್ಬಣವಾಗುತ್ತದೆ.  ಆದಷ್ಟು ತೇವಾಂಶ ತಡೆಗಟ್ಟಿದರೆ - ಈ ತೊಂದರೆ ಬರುವುದಿಲ್ಲ.  ಹೆಚ್ಚಾಗಿ ಕಂಡುಬಂದಲ್ಲಿ ವೈದ್ಯರನ್ನು ಸಂಪರ್ಕಿಸಿ - ಸೋಂಕಾಗಿರುವ ಸಾಧ್ಯತೆ ಇದೆ...!

ಪಾದ:  ಕೆಲ ಮಕ್ಕಳಲ್ಲಿ ತಾಯಿಯ ಗರ್ಭದೊಳಗಿನ ಸ್ಥಿತಿಯಿಂದ ಪಾದ ತಿರುಗಿದಂತಿರಬಹುದು.  ಗಾಬರಿ ಬೇಡ.  ಸಾಮಾನ್ಯವಾಗಿ ಇದು ತಂತಾನೆ ಸರಿಹೋಗುತ್ತದೆ ಅಥವ ಸ್ವಲ್ಪ ಪಾದದ ವ್ಯಾಯಾಮ (Stretching exercise) ಮಾಡಬೇಕಾಗುತ್ತದೆ.  ವೈದ್ಯರ ಸಲಹೆ ಅಗತ್ಯ.

ಡಾ. ಮಲ್ಲಿಕಾರ್ಜುನ ಸ್ವಾಮಿ ಹೆಚ್.ಪಿ (ನವಜಾತ ಶಿಶು ತಜ್ಞ)